ಪವಿತ್ರ ಸ್ಥಳ -
	ದೇವರ ಸಾನ್ನಿಧ್ಯವಿರುವ ಸ್ಥಳ (ಸ್ಯಾಂಕ್ಚುಯರಿ.) ಕ್ರೈಸ್ತ ದೇವಾಲಯಗಳಲ್ಲಿ ವೇದಿ ಇರುವ ಸ್ಥಳಕ್ಕೂ ಈ ಹೆಸರುಂಟು. ದೈವಾರಾಧನೆಗೆ ಯೋಗ್ಯವಾದವುಗಳೆಂತಲೂ ಆಶ್ರಯಸ್ಥಾನಗಳೆಂತಲೂ ನಿರ್ಣಯಿಸಲ್ಪಟ್ಟಿದ್ದವು. ದೈವರಾಧನೆಗಾಗಿ ಜನ ಇಲ್ಲಿ ಸೇರುವುದಿದೆ. ವೈದಿಕರಿಗೆ ಮಾತ್ರ ಇಲ್ಲಿ ಪ್ರವೇಶ ಉಂಟು.

	ಮಧ್ಯಯುಗದಲ್ಲಿ ಈ ಸ್ಥಳಗಳಿಗೆ ಅಪರಾಧಿಗಳು ಆಶ್ರಯಕ್ಕಾಗಿ ಹೋಗಿ ಅಲ್ಲಿಂದ ಉಪಾಯವಾಗಿ ಹತ್ತಿರದ ರೇವಿಗೆ ಹೋಗಿ ತಲೆ ತಪ್ಪಿಸಿಕೊಳ್ಳುತ್ತಿದ್ದರು. 1623ರಲ್ಲಿ 1ನೆಯ ಜೇಮ್ಸನ ಆಳ್ವಿಕೆಯಲ್ಲಿ ಇಂಥ ಸ್ಥಳಗಳಿರಕೂಡದೆಂಬ ಕಾನೂನು ಜಾರಿಗೆ ಬಂತು.
(ಎಚ್.ಡಿ.ಎಲ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ